ಉತ್ತರಕಾಶಿಯಲ್ಲಿ ಮಳೆಯಿಂದ ನಿರಂತರವಾಗಿ ಭೂ ಕುಸಿತ: ಗಂಗೋತ್ರಿ ಹೆದ್ದಾರಿ ಬಂದ್ - ನಿರಂತರವಾಗಿ ಭೂ ಕುಸಿತ
ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡ ರಾಜ್ಯಾದ್ಯಂತ ಧಾರಾಕಾರ ಮಳೆ ಮುಂದುವರಿದಿದೆ. ಮಳೆಯ ಅನಾಹುತಕ್ಕೆ ತಡೆ ಇಲ್ಲದಂತಾಗಿದೆ. ಅಲ್ಲದೇ, ಉತ್ತರಕಾಶಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ನಿರಂತರವಾಗಿ ಭೂ ಕುಸಿತಗಳು ಸಂಭವಿಸುತ್ತಿವೆ. ಇದೀಗ ಗಂಗೋತ್ರಿ ಹೆದ್ದಾರಿಯಲ್ಲೂ ಭೂಕುಸಿತ ಉಂಟಾಗಿ ಕಲ್ಲು ಬಂಡೆಗಳು ಉರುಳಿ ಬಿದ್ದಿವೆ. ಇದರಿಂದಾಗಿ ಗಂಗೋತ್ರಿ ಹೆದ್ದಾರಿ ಬಂದ್ ಆಗಿದೆ.