ಪೆಟ್ರೋಲ್ ಬೆಲೆ ಏರಿಕೆಗೆ ಆಕ್ರೋಶ: ಒಂಟೆ ಏರಿ ಕಾಂಗ್ರೆಸ್ ಮುಖಂಡನ ಪ್ರತಿಭಟನೆ
ರಾಜಮಂಡ್ರಿ(ಆಂಧ್ರಪ್ರದೇಶ): ದೇಶಾದ್ಯಂತ ಪೆಟ್ರೋಲ್ ದರ ಏರಿಕೆಯಾಗಿದ್ದು, ಈಗಾಗಲೇ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಇದೇ ವಿಚಾರ ಇಟ್ಟುಕೊಂಡು ಆಂಧ್ರಪ್ರದೇಶ ಕಾಂಗ್ರೆಸ್ ಮಾಜಿ ಸಂಸದ ಜಿವಿ ಹರ್ಷ ಕುಮಾರ್ ಒಂಟೆ ಏರಿ ಪ್ರತಿಭಟನೆ ನಡೆಸಿದ್ರು. ತಮ್ಮ ನಿವಾಸದಿಂದ ರಾಜಮಂಡ್ರಿಯಲ್ಲಿರುವ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯವರೆಗೆ ಒಂಟೆ ಮೇಲೆ ಹತ್ತಿ ಪ್ರಯಾಣ ಬೆಳೆಸಿದ್ರು.