ಪಶ್ಚಿಮ ಘಟ್ಟದಲ್ಲಿ ಘಾಟಿಯಾನ ದ್ವಿವರ್ಣ ಏಡಿ ಪತ್ತೆ: ಪರಿಸರ ವಿಜ್ಞಾನಿಗಳ ಮಾಹಿತಿ - ಜೀವವೈವಿಧ್ಯತೆಯ ಹಾಟ್ಸ್ಪಾಟ್
ಪಶ್ಚಿಮ ಘಟ್ಟಗಳು ಜೀವವೈವಿಧ್ಯತೆಯ ಶ್ರೀಮಂತ ತಾಣ. ಇಲ್ಲಿ ಕಂಡುಬರುವ ವಿಭಿನ್ನ ಸಸ್ಯ, ಪ್ರಾಣಿ ಪ್ರಭೇದಗಳು ಸಾಕಷ್ಟು ವಿಶೇಷತೆಗಳಿಂದ ಕೂಡಿವೆ. ಸುಮಾರು 5,000 ಪ್ರಕಾರದ ಮರಗಳು, 139 ರೀತಿಯ ಸಸ್ತನಿ, 508 ಪಕ್ಷಿ ಪ್ರಭೇದ, 334 ರೀತಿಯ ಚಿಟ್ಟೆಗಳು ಮತ್ತು 179 ಉಭಯವಾಸಿ ಪ್ರಭೇದಗಳು ಇಲ್ಲಿ ಕಂಡುಬರುತ್ತವೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಘಾಟಿಯಾನ ದ್ವಿವರ್ಣ ಎಂಬ ಸಿಹಿನೀರಿನ ಏಡಿ ಇತ್ತೀಚೆಗೆ ಕಂಡುಬಂದಿದೆ. ಮುಖ್ಯವಾಗಿ ಘಾಟಿಯಾನ ಕುಲದಲ್ಲಿ ಇದುವರೆಗೆ 13 ವಿವಿಧ ಜಾತಿಯ ಸಿಹಿನೀರಿನ ಏಡಿಗಳನ್ನು ಗುರುತಿಸಲಾಗಿದೆ. ಈ ಬಗ್ಗೆ ನೈಸರ್ಗಿಕ ವಿಜ್ಞಾನಿಯೊಬ್ಬರು ಮಾಹಿತಿ ನೀಡಿದರು.