ಕೆರೆಗೆ ಸ್ನಾನಕ್ಕೆಂದು ತೆರಳಿದ್ದ ನಾಲ್ವರು ಮಕ್ಕಳು: ವಿದ್ಯುತ್ ಶಾಕ್ ತಗುಲಿ ದಾರುಣ ಸಾವು - ಈಟಿವಿ ಭಾರತ ಕರ್ನಾಟಕ
ಅಹ್ಮದ್ನಗರ (ಮಹಾರಾಷ್ಟ್ರ) : ಒಂದೇ ಕುಟುಂಬದ ನಾಲ್ವರು ಮಕ್ಕಳು ವಿದ್ಯುತ್ ಶಾಕ್ನಿಂದ ಮೃತ ಪಟ್ಟ ಘಟನೆ ನಡೆದಿದೆ. ಮಕ್ಕಳು ಸ್ನಾನಕ್ಕೆಂದು ಕರೆಗೆ ಇಳಿದ ವೇಳೆ ವಿದ್ಯುತ್ ಶಾಕ್ ತಗುಲಿದೆ. ಮಳೆಯಿಂದಾಗಿ ಕರೆಂಟ್ ವೈಯರ್ ತುಂಡಾಗಿ ಕೆರೆಗೆ ತಾಗಿ ಕೊಂಡಿದ್ದರಿಂದ ಈ ಘಟನೆ ಸಂಭವಿಸಿದೆ. ಮೃತರನ್ನು ಅನಿಕೇತ್ ಅರುಣ್ ಬರ್ದಾಯಿ, ಓಂಕಾರ್ ಅರುಣ್ ಬರ್ದಾಯಿ, ದರ್ಶನ್ ಅಜಿತ್ ಬರ್ದಾಯಿ ಮತ್ತು ವಿರಾಜ್ ಅಜಿತ್ ಬರ್ದಾಯಿ ಎಂದು ಗುರುತಿಸಲಾಗಿದೆ. ಕೆರೆಯ ಬಳಿ ಆ್ಯಂಬುಲೆನ್ಸ್ ಬರಲು ಆಗದ ಕಾರಣ ಹೊದಿಕೆಯಲ್ಲಿ ಮಕ್ಕಳ ಶವ ಸಾಗಿಸಲಾಯಿತು. ಕುಟುಂಬಸ್ಥರು ವಿದ್ಯುತ್ನಿಗಮದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.