ನಾನು ಸುರಕ್ಷಿತವಾಗಿದ್ದೇನೆ : ಮಾಜಿ ಸಚಿವ ಟಿ. ಬಿ ಜಯಚಂದ್ರ - ತುಮಕೂರಿನಲ್ಲಿ ರಸ್ತೆ ಅಪಘಾತದ ಬಗ್ಗೆ ಟಿ ಬಿ ಜಯಚಂದ್ರ ಹೇಳಿಕೆ
ನಿನ್ನೆ ರಾತ್ರಿ (ಮಂಗಳವಾರ) ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಮಾಜಿ ಸಚಿವ ಟಿ ಬಿ ಜಯಚಂದ್ರ ಅವರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದು, ನಾನು ಸುರಕ್ಷಿತವಾಗಿದ್ದೇನೆ. ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನಿನ್ನೆ ರಾತ್ರಿ ಶಿರಾದಿಂದ ಬೆಂಗಳೂರು ಕಡೆಗೆ ಹೋಗುವ ಸಂದರ್ಭದಲ್ಲಿ ನಾನು ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಉರುಳಿತ್ತು. ಸ್ಥಳೀಯರ ಸಹಾಯದಿಂದ ನಾನು ಆಸ್ಪತ್ರೆಗೆ ಸೇರಿದ್ದೇನೆ. ಇನ್ನುಳಿದಂತೆ ನನ್ನ ಜೊತೆಯಲ್ಲಿದ್ದ ಚಾಲಕ ಹಾಗೂ ಗನ್ಮ್ಯಾನ್ ಕೂಡ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.