ಬೆಂಗಳೂರು: ಕಾರಿನಲ್ಲಿ ಬಂದು ಹೂಕುಂಡ ಕದ್ದ ಜೋಡಿ: ಸಿಸಿಟಿವಿಯಲ್ಲಿ ಕೃತ್ಯ ಸೆರೆ - ಹೂಕುಂಡ ಕದ್ದ ಜೋಡಿ ಸಿಸಿಟಿವಿ ದೃಶ್ಯ
ಬೆಂಗಳೂರು: ಲಕ್ಷಾಂತರ ರೂ.ಮೌಲ್ಯದ ಕಾರಿನಲ್ಲಿ ರಾತ್ರೋರಾತ್ರಿ ಬಂದು ಹೂಕುಂಡ ಕಳ್ಳತನ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದೆ. ನೋಡಲು ಅಕ್ಷರವಂತರಂತೆ ಕಾಣುವ ಯುವಕ ಹಾಗೂ ಯುವತಿ ಬಸವನಗುಡಿಯ ಸ್ಟುಡಿಯೋ ಮುಂದೆ ಇಟ್ಟಿದ್ದ ಪಾಟ್ ಕದ್ದಿದ್ದಾರೆ. ಯುವತಿ ಗ್ಲಾಸ್ ಕ್ಲೀನ್ ಮಾಡುವ ನಾಟಕ ವಾಡಿದರೆ, ಯುವಕ ಡಿಕ್ಕಿಯಲ್ಲಿ ಕದ್ದ ಪಾಟ್ ಇರಿಸಿದ್ದಾನೆ. ಬಳಿಕ ಇಬ್ಬರು ಎಸ್ಕೇಪ್ ಆಗಿದ್ದಾರೆ. ಈ ಜೋಡಿಯ ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ.