ಮುಚ್ಚಿದ ಒಳಚರಂಡಿ.. ಕೃತಕ ಪ್ರವಾಹಕ್ಕೆ ಕೊಚ್ಚಿಹೋದ ವಾಹನಗಳು-ವಿಡಿಯೋ - Rain effect in Kashmir
ಪೂಂಚ್: ಕಾಶ್ಮೀರದ ಪೂಂಚ್ ಜಿಲ್ಲೆಯ ಸುರನ್‌ಕೋಟೆ ಪಟ್ಟಣದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ವಾಹನಗಳು, ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, ಕಾರುಗಳು ನೀರಿನಲ್ಲಿ ಮುಳುಗಿರುವ ವಿಡಿಯೋ ವೈರಲ್ ಆಗಿದೆ. ಸುಮಾರು ಅರ್ಧ ಗಂಟೆ ಸುರಿದ ಮಳೆಗೆ ಪ್ರವಾಹ ಉಂಟಾಗಿದೆ. ನಗರದಲ್ಲಿ ಒಳಚಂರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ, ಕೃತಕ ಪ್ರವಾಹ ಉಂಟಾಗಿ ಹಲವಾರು ವಾಹನಗಳು ಕೊಚ್ಚಿಹೋಗಿವೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.