ಕರ್ನಾಟಕ

karnataka

ETV Bharat / videos

ವಿಶಾಖಪಟ್ಟಣಂನಲ್ಲಿ ಹೊತ್ತಿ ಉರಿದ ಆಗ್ರೋ ಇಂಡಸ್ಟ್ರೀಸ್: VIDEO - ವಿಶಾಖಪಟ್ಟಣಂ ಬೆಂಕಿ ಪ್ರಕರಣ

By

Published : Jan 28, 2021, 3:29 AM IST

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಅಗನಂಪುಡಿಯಲ್ಲಿರುವ ಎಪಿಐಐಸಿ ಕೈಗಾರಿಕಾ ವಲಯದ ಪ್ಯಾರಾಮೌಂಟ್ ಆಗ್ರೋ ಇಂಡಸ್ಟ್ರೀಸ್​​ನಲ್ಲಿ ಬುಧವಾರ ರಾತ್ರಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದರು. ಮಾಹಿತಿ ಪಡೆದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಮೂಲಗಳ ಪ್ರಕಾರ, ತೈಲ ಸಂಗ್ರಹಿಸಿದ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿರುವ ವರದಿಯಾಗಿಲ್ಲ.

ABOUT THE AUTHOR

...view details