ಕರ್ನಾಟಕ

karnataka

ETV Bharat / videos

ಹಗಲಲ್ಲೇ ಫೈನಾನ್ಸ್ ಕಂಪನಿ ಮಾಲೀಕನ ಹತ್ಯೆ: ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯಾವಳಿ - ಚೆನ್ನೈನಲ್ಲಿ ಹಗಲಲ್ಲೇ ಫೈನಾನ್ಸ್ ಕಂಪನಿ ಮಾಲೀಕನ ಹತ್ಯೆ

By

Published : May 20, 2022, 7:09 PM IST

ಚೆನ್ನೈ: ಬರುವ ಮೇ 18, ಬುಧವಾರದಂದು ಚೆನ್ನೈನ ಅಮಿಂಜಿಕರೈನಲ್ಲಿ 36 ವರ್ಷದ ಫೈನಾನ್ಸ್ ಕಂಪನಿ ಮಾಲೀಕನನ್ನು ಆರು ಅಪರಿಚಿತ ವ್ಯಕ್ತಿಗಳು ಕ್ರೂರವಾಗಿ ಕೊಂದಿದ್ದಾರೆ. ಮೃತರನ್ನು ಚೆಟ್‌ಪೇಟ್‌ನ ಆರ್ಮುಗಂ ಎಂದು ಗುರುತಿಸಲಾಗಿದೆ. ಆರ್ಮುಗಂ ತನ್ನ ಸ್ನೇಹಿತ ರಮೇಶ್ ಜೊತೆಗೆ ದ್ವಿಚಕ್ರ ವಾಹನದಲ್ಲಿ ಅಣ್ಣಾನಗರದಲ್ಲಿರುವ ಕಚೇರಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮೂರು ಬೈಕ್‌ಗಳಲ್ಲಿ ಬಂದ ಆರು ಮಂದಿ ಪುಲ್ಲಾ ಅವೆನ್ಯೂ ಬಳಿ ಆರ್ಮುಗಂ ಅವರನ್ನು ಅಡ್ಡಗಟ್ಟಿ ಕೊಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರ ಪ್ರಕಾರ, ಆರ್ಮುಗಂ ವಿರುದ್ಧ ಕೊಲೆ ಪ್ರಕರಣಗಳು ಸೇರಿದಂತೆ ವಿವಿಧ ಪ್ರಕರಣಗಳಿವೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಏತನ್ಮಧ್ಯೆ, ಗುರುವಾರ (ಮೇ 19) ಚೆನ್ನೈನ ಶೆಣೈ ನಗರದ ರೋಹಿತ್ ರಾಜ್ (31) ಮತ್ತು ಚಂದ್ರಶೇಖರ್ (28) ಎಂಬುವವರು ಆರ್ಮುಗಂರನ್ನು ಕೊಂದ ಆರೋಪದ ಮೇಲೆ ಕಲ್ಲಕುರಿಚಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಇನ್ನುಳಿದ ನಾಲ್ವರು ಆರೋಪಿಗಳ ಶೋಧ ಕಾರ್ಯದಲ್ಲಿ ಪೊಲೀಸರು ಮುಂದಾಗಿದ್ದಾರೆ.

ABOUT THE AUTHOR

...view details