ಕರ್ನಾಟಕ

karnataka

ETV Bharat / videos

ಕರಾವಳಿ ಕಾಪುವಿನಲ್ಲಿ ಮೀನುಗಾರರಿಗೆ ಭೂತಾಯಿ ಸುಗ್ಗಿ: ಟನ್​ಗಟ್ಟಲೆ ಮೀನು ಬಲೆಗೆ - ಕಾಪು ಕೈಪುಂಜಾಲು ಓಂ ಸಾಗರ್ ಜೋಡು ದೋಣಿ

By

Published : May 13, 2022, 7:29 PM IST

ಇಂದು ಮಧ್ಯಾಹ್ನ ಕಾಪು ಕೈಪುಂಜಾಲು ಓಂ ಸಾಗರ್ ಜೋಡು ದೋಣಿಗೆ ಭರ್ಜರಿ ಭೂತಾಯಿ ಮೀನು ಸಿಕ್ಕಿದೆ. ಬಲೆಗೆ ಟನ್‌ಗಟ್ಟಲೆ ಭೂತಾಯಿ ಮೀನು ಬಿದ್ದಿದೆ. ಸುಮಾರು 30 ಟನ್​ಗೂ ಅಧಿಕ ಭೂತಾಯಿ ಮೀನು ಬಲೆಗೆ ಬಿದ್ದಿದ್ದು, ಅಂದಾಜು 30 ಲಕ್ಷ ರೂಪಾಯಿಗೂ ಹೆಚ್ಚಿನ ಬೆಲೆಗೆ ಮೀನು ಮಾರಾಟವಾಗಿದೆ. ಅಸಾನಿ ಚಂಡಮಾರುತದಿಂದ ಕಡಲು ಪ್ರಕ್ಷುಬ್ಧವಾಗಿದ್ದು, ಗಂಗೊಳ್ಳಿಯಿಂದ ಮಂಗಳೂರು ಕರಾವಳಿಯವರೆಗೆ ಭೂತಾಯಿ ಮೀನಿನ ಚಲನವಲನ ಕಂಡು ಬರುತ್ತಿದೆ. ಸಾಮೂಹಿಕವಾಗಿ ಬಲೆಗೆ ಬಿದ್ದ ಭೂತಾಯಿ ಮೀನು ರಾಶಿಗೆ ಮೀನುಗಾರರು ಖುಷಿಯಾಗಿದ್ದಾರೆ.

ABOUT THE AUTHOR

...view details