ಪ್ಯಾಸೆಂಜರ್ ರೈಲಿನಿಂದ ಬಿದ್ದ ಪ್ರಯಾಣಿಕನನ್ನ ರಕ್ಷಿಸಿದ ಮಹಿಳಾ ಗಾರ್ಡ್.. ವಿಡಿಯೋ - ಪ್ಯಾಸೆಂಜರ್ ರೈಲಿನಿಂದ ಬಿದ್ದ ಪ್ರಯಾಣಿಕನ ರಕ್ಷಣೆ
ಚೆನ್ನೈ(ತಮಿಳುನಾಡು): ಚೆನ್ನೈನ ಎಗ್ಮೋರ್ನಿಂದ ತಿರುಚ್ಚಿಗೆ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲಿನಿಂದ ಪ್ರಯಾಣಿಕನೊಬ್ಬ ಹಠಾತ್ತನೆ ಕೆಳಗೆ ಬಿದ್ದಿರುವ ಘಟನೆ ನಡೆದಿದ್ದು, ಈ ವೇಳೆ ಮಹಿಳಾ ರೈಲ್ವೇ ಗಾರ್ಡ್ ಆತನ ರಕ್ಷಣೆ ಮಾಡಿದ್ದಾರೆ. ರೈಲು ಹೊರಡಲು ಸಜ್ಜಾಗುತ್ತಿದ್ದ ವೇಳೆ ಪ್ರಯಾಣಿಕನೋರ್ವ ಜಾರಿ ಟ್ರ್ಯಾಕ್ ಮೇಲೆ ಬಿದ್ದಿದ್ದಾನೆ. ಇದನ್ನ ಗಮಸಿರುವ ಮಹಿಳಾ ರೈಲ್ವೇ ಗಾರ್ಡ್ ಮಾಧುರಿ, ಆತನ ರಕ್ಷಣೆ ಮಾಡಿದ್ದಾರೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಹಿಳಾ ಸಿಬ್ಬಂದಿ ಕೆಲಸಕ್ಕೆ ಇದೀಗ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.