ಕೃಷಿ ಭೂಮಿ ಸ್ವಾಧೀನ ಬೇಡ: ಸಿಎಂ ತವರು ಜಿಲ್ಲೆಯ ರೈತರಿಂದ ಕಣ್ಣೀರು - ಈಟಿವಿ ಭಾರತ ಕನ್ನಡ
ಹಾವೇರಿ : ಜಿಲ್ಲೆ ಶಿಗ್ಗಾಂವಿ ಪಟ್ಟಣದ ಡಿವೈಎಸ್ಪಿ ಕಚೇರಿ ಉದ್ಘಾಟನೆಗೆ ಮುಗಿಸಿ ಹೊರಟಿದ್ದ ಸಿಎಂ ಬಸವರಾಜ ಬೊಮ್ಮಾಯಿಯವರ ಭೇಟಿಗೆ ಬಂದಿದ್ದ ರೈತರು ಕಣ್ಣೀರು ಸುರಿಸಿದ ಘಟನೆ ನಡೆದಿದೆ. ಜಿಲ್ಲೆಯ ಕೋಳೂರು ಗ್ರಾಮದ ಬಳಿ ಸರ್ಕಾರವು ಕೈಗಾರಿಕಾ ಉದ್ದೇಶಕ್ಕೆ 440 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳುವುದನ್ನು ಕೈಬಿಡುವಂತೆ ಮನವಿ ಮಾಡಲು ರೈತರು ಬಂದಿದ್ದರು. ನೀರಾವರಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ.ಹೀಗಾಗಿ ಯಾವುದೇ ಕಾರಣಕ್ಕೂ ಭೂಮಿ ಸ್ವಾಧೀನ ಮಾಡಿಕೊಳ್ಳದಂತೆ ಸಿಎಂಗೆ ಮನವಿ ಸಲ್ಲಿಸಿ ರೈತ ಮಂಜುನಾಥ ಅಣ್ಣಿಗೇರಿ ಎಂಬವರು ಕಣ್ಣೀರು ಹಾಕಿದರು.