ತಮಿಳುನಾಡಿನಲ್ಲಿ 20 ಸಾವಿರ ಗಣೇಶನ ಅವತಾರಗಳ ಪ್ರದರ್ಶನ: ವಿಡಿಯೋ - 20 ಸಾವಿರಕ್ಕೂ ಅಧಿಕ ಮೂರ್ತಿಗಳ ಪ್ರದರ್ಶನ
ಗಣೇಶ ಚತುರ್ಥಿ ಸಲುವಾಗಿ ಸಾರ್ವಜನಿಕವಾಗಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ, ತಮಿಳುನಾಡಿನ ಚೆನ್ನೈನ ತಂಬರತ್ ಎಂಬಲ್ಲಿ 20 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸಚಿವ ಅನ್ಬರಸನ್ ಇದರ ನೇತೃತ್ವ ವಹಿಸಿದ್ದಾರೆ. ಇಲ್ಲಿ ವೈದ್ಯ ಗಣೇಶ, ಡ್ರೈವಿಂಗ್ ಗಣಪ, ವೀಣೆ ನುಡಿಸುವ ವಿನಾಯಕ ಸೇರಿದಂತೆ ಹಲವಾರು ಬಗೆಗಳಲ್ಲಿ ಶಿವನ ಪುತ್ರನನ್ನು ರೂಪಿಸಲಾಗಿದೆ. 3 ಮಹಡಿಗಳಲ್ಲಿ 20 ಸಾವಿರಕ್ಕೂ ಹೆಚ್ಚಿರುವ ಗಣೇಶ ಮೂರ್ತಿಗಳು ಜನರ ಗಮನ ಸೆಳೆಯುತ್ತಿವೆ. ಪ್ರದರ್ಶನ ಸೆಪ್ಟೆಂಬರ್ 12 ರವರೆಗೆ ನಡೆಯಲಿದೆ.