ಜಾತ್ರೆಗೆ ಬಂದಿದ್ದ ಮಹಿಳೆಯರ ಕೈಗೆ ಬಳೆ ತೊಡಿಸಿದ ಮಾಜಿ ಡಿಸಿಎಂ ಜಿ.ಪರಮೇಶ್ವರ್ - Former Deputy Chief Minister G Parameshwar
ತುಮಕೂರು: ಕೊರಟಗೆರೆ ತಾಲೂಕಿನ ಅಗ್ರಹಾರ ನಮದ ಜಾತ್ರೆಯಲ್ಲಿ ಸುತ್ತಾಡಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಜಾತ್ರೆಗೆ ಬಂದಿದ್ದ ಮಹಿಳೆಯರ ಕೈಗೆ ಬಳೆಗಳನ್ನು ತೊಡಿಸಿ ಸಂತಸಪಟ್ಟರು. ಅಲ್ಲದೇ ಜಾತ್ರೆಯ ತುಂಬೆಲ್ಲ ಓಡಾಡಿ ಮಂಡಕ್ಕಿ ಖಾರ ಖರೀದಿಸಿದರು. ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಇದಾಗಿದ್ದು ಕೆಲ ಸಹೋದರಿಯರಿಗೆ ಬಳೆ ಕೊಡಿಸಿ ತೊಡಿಸಿದ್ದು ವಿಶೇಷವಾಗಿತ್ತು. ಕಳೆದ ವರ್ಷವೂ ಸಹ ತುಂಬಾಡಿ ಗ್ರಾಮ ಜಾತ್ರೆಯಲ್ಲಿ ಸೇರಿದ್ದ ಮಹಿಳೆಯರಿಗೆ ಪರಮೇಶ್ವರ್ ಬಳೆ ಕೊಡಿಸಿದ್ದಲ್ಲದೆ, ಬಳೆ ಮಾರುವ ಮಹಿಳೆಗೆ ತಮ್ಮ ಕಿಸೆಯಿಂದ ಐದು ಸಾವಿರ ರೂ.ಕೊಟ್ಟು ಅಲ್ಲಿಂದ ತೆರಳಿದ್ದರು.