ಬಾಳೆಹೊನ್ನೂರು ಮಠಕ್ಕೆ ಸಿದ್ದರಾಮಯ್ಯ ಭೇಟಿ: ರುದ್ರಾಕ್ಷಿ ಹಾರ ಹಾಕಿದ ರಂಭಾಪುರಿ ಶ್ರೀ - ಕಾಶಿಯಿಂದ ತಂದಿದ್ದ ರುದ್ರಾಕ್ಷಿ ಹಾರ
ಚಿಕ್ಕಮಗಳೂರು: ಜಿಲ್ಲೆಯ ಎನ್ಆರ್ ಪುರ ತಾಲೂಕಿನಲ್ಲಿರುವ ಬಾಳೆಹೊನ್ನೂರು ಸಮೀಪದ ಶ್ರೀಮದ್ ರಂಭಾಪುರಿ ಮಠಕ್ಕೆ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭೇಟಿ ನೀಡಿದರು. ಸಿದ್ದರಾಮಯ್ಯನವರನ್ನು ನೋಡಿದ ಕೂಡಲೇ ಮಠದ ಪ್ರಸನ್ನ ರೇಣುಕಾವೀರ ಸೋಮೇಶ್ವರ ಶಿವಾಚಾರ್ಯರು, ಬರ್ತೀನಿ...ಬರ್ತೀನಿ ಎಂದು ಈಗ ಬಂದಿದ್ದೀರಾ ಎಂದು ಕೇಳಿದರು. ನಂತರ ಶ್ರೀಗಳ ಆರ್ಶೀವಾದ ಪಡೆದ ಸಿದ್ದರಾಮಯ್ಯನವರಿಗೆ ಶ್ರೀಗಳು ಕಾಶಿಯಿಂದ ತಂದಿದ್ದ ರುದ್ರಾಕ್ಷಿ ಹಾರ ಹಾಕಿ, ಮುಂದಿನ ಚುನಾವಣೆ ಆಗುವವರೆಗೂ ಕೊರಳಲ್ಲಿರಲಿ ಎಂದು ಹೇಳಿದರು. ಬಳಿಕ ಕೆಲ ಹೊತ್ತು ಸಿದ್ದರಾಮಯ್ಯ ಹಾಗೂ ಸ್ವಾಮೀಜಿ ಮಾತುಕತೆ ನಡೆಸಿದರು.