ತುಂಗಭದ್ರಾ ಜಲಾಶಯದಲ್ಲಿ ಅಪರೂಪದ 'ನೀರು ನಾಯಿ'ಗಳ ಹಿಂಡು ಪ್ರತ್ಯಕ್ಷ! - Eurasian otter
ವಿಜಯನಗರ: ತುಂಗಭದ್ರಾ ಜಲಾಶಯ ಭರ್ತಿ ಹಿನ್ನೆಲೆ ಅಪರೂಪದ ಜೀವ ಪ್ರಭೇದ ನೀರು ನಾಯಿಗಳು ಪ್ರತ್ಯಕ್ಷವಾಗಿವೆ. ಜಲಾಶಯದಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನೀರು ನಾಯಿಗಳು ಈಗ ಸ್ವಚ್ಚಂದವಾಗಿ ಸಂಚರಿಸುವುದಕ್ಕೆ ಆರಂಭಿಸಿವೆ. ಜನರಿಲ್ಲದ ವೇಳೆ ತುಂಗಭದ್ರಾ ಜಲಾಶಯದ ದಡದ ಮೇಲೆ ನೀರು ನಾಯಿಗಳು ಹಿಂಡು ಹಿಂಡಾಗಿ ಬರುತ್ತಿವೆ. ಹಂಪಿ ಬಳಿಯ ತುಂಗಭದ್ರಾ ನದಿಯಲ್ಲಿಯೂ ನೀರು ನಾಯಿಗಳು ಕಾಣಿಸಿಕೊಂಡಿವೆ.