ವಿಡಿಯೋ ನೋಡಿ: ಪ್ರವಾಸಿಗರಿಗೆ ನಡುಕ ಹುಟ್ಟಿಸಿದ ಒಂಟಿ ಸಲಗ! - ಆನೆ ವೈರಲ್ ವಿಡಿಯೋ
ರಾಮ್‌ನಗರ(ಉತ್ತರಾಖಂಡ): ವಿಶ್ವವಿಖ್ಯಾತ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಧಿಕಾಲಾ ವಲಯದಲ್ಲಿ ಒಂಟಿ ಸಲಗವೊಂದು ಡಿಢೀರನೆ ಪ್ರವಾಸಿಗರಿದ್ದ ಕ್ಯಾಂಟರ್ಗೆ ಎದುರಾಗಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದ್ದು, ಪ್ರವಾಸಿಗರು ನಿಟ್ಟುಸಿರು ಬಿಟ್ಟರು. ಧಿಕಾಲಾ ವಲಯದಲ್ಲಿ ಎಂದಿನಂತೆ ಪ್ರವಾಸಿಗರೊಂದಿಗೆ ಸಫಾರಿ ಕ್ಯಾಂಟರ್ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಆನೆಗಳ ಹಿಂಡಿನಲ್ಲಿದ್ದ ಸಲಗ ಕ್ಯಾಂಟರ್ ಕಡೆಗೆ ಓಡೋಡಿ ಬಂದಿದೆ. ಆನೆ ತನ್ನತ್ತ ಬರುತ್ತಿರುವುದನ್ನು ಕಂಡ ಚಾಲಕ, ವಾಹನವನ್ನು ಹಿಂದಕ್ಕೆ ತೆಗೆದುಕೊಂಡಿದ್ದಾನೆ. ಈ ವೇಳೆ ಕ್ಯಾಂಟರ್‌ನಲ್ಲಿದ್ದ ಪ್ರವಾಸಿಗರ ಕೂಗಾಟಕ್ಕೆ ಆನೆ ಹೆದರಿ ಪಕ್ಕದ ದಾರಿಯಲ್ಲಿ ತೆರಳಿತು.