ನಾ ಹೆಚ್ಚು..ನೀ ಕಡಿಮೆ.. ಮದಗಜಗಳ ಕಾದಾಟದ ವಿಡಿಯೋ ನೋಡಿ - ಆನೆಗಳ ಕಾದಾಟದ ವಿಡಿಯೋ
ಜಲ್ಪೈಗುರಿ(ಪಶ್ಚಿಮ ಬಂಗಾಳ): ಆನೆಗಳ ಕಾದಾಟದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಲ್ಲಿನ ಬಿನ್ನಗುರಿ ಸೇನಾ ಶಿಬಿರದಲ್ಲಿ ನಡೆದ ಮದಗಜಗಳ ಪೈಪೋಟಿಯನ್ನು ಸೇನಾ ಶಿಬಿರದ ಸಿಬ್ಬಂದಿ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ಎರಡು ಆನೆಗಳು ನಾ ಹೆಚ್ಚು, ನೀ ಕಡಿಮೆ ಎಂಬಂತೆ ಸೋಲೊಪ್ಪಿಕೊಳ್ಳದೆ ಶಕ್ತಿ ಪ್ರದರ್ಶನ ಮಾಡುತ್ತಿರುವುದನ್ನು ಕಾಣಬಹುದು.