ಜೀಪ್ನಲ್ಲಿ ಹೋಗ್ತಿದ್ದಾಗ ದಿಢೀರ್ ಪ್ರತ್ಯಕ್ಷವಾದ ಆನೆ.. 'ಹೋಗು ವಿನಾಯಕ' ಎಂದು ಮನವಿ ! - ದಿಢೀರ್ ಆಗಿ ಪ್ರತ್ಯಕ್ಷವಾದ ಆನೆ
ಈರೋಡ್(ತಮಿಳುನಾಡು): ಸತ್ಯಮಂಗಲದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅನೇಕ ಆನೆಗಳು, ಕಾಡು ಪ್ರಾಣಿಗಳಿವೆ. ಇಲ್ಲಿ ಕಡಂಬೂರಿನಿಂದ ಗುಂಡ್ರಿಗೆ ಹೋಗಲು ರಸ್ತೆ ಮಾರ್ಗವಿದೆ. ಇದರ ಮೂಲಕ ನಾಲ್ವರು ಜೀಪ್ನಲ್ಲಿ ತೆರಳುತ್ತಿದ್ದ ವೇಳೆ ದಿಢೀರ್ ಆಗಿ ಒಂಟಿ ಸಲಗವೊಂದು ಕಾಣಿಸಿಕೊಂಡಿದೆ. ಇದನ್ನು ನೋಡಿರುವ ಜನರು ಹೆದರಿದ್ದು, ಹೋಗು ಗಜರಾಜ ಎಂದು ಕನ್ನಡದಲ್ಲೇ ಮನವಿ ಮಾಡಿದ್ದಾರೆ. ಅದೃಷ್ಟವಶಾತ್ ಅದು ಯಾವುದೇ ರೀತಿಯ ತೊಂದರೆ ಮಾಡದೇ ಸುಮ್ಮನೆ ತೆರಳಿದೆ. ಇದರ ವಿಡಿಯೋ ವ್ಯಕ್ತಿಯೋರ್ವನ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.