ಕರ್ನಾಟಕ

karnataka

ETV Bharat / videos

ಅಯ್ಯೋ ಮತ್ತೆ ಕಾಡಿಗೆ ಹೋಗ್ಬೇಕಾ?..ಯೋಚಿಸುತ್ತ ನಿಂತ ಅರ್ಜುನ - ಜಂಬೂಸವಾರಿ ಮೆರವಣಿಗೆ

By

Published : Oct 6, 2022, 6:04 PM IST

ಜಂಬೂಸವಾರಿ ಯಶಸ್ವಿಯಾಗಿ ಮುಗಿಯಿತು. ಅಯ್ಯೋ ನಾ ಮತ್ತೆ ಕಾಡಿಗೆ ಹೋಗ್ಬೇಕಾ ಅಂತ ಯೋಚ್ನೆ ಮಾಡ್ತ ನಿಂತ್ಕೊಂಡ ಅರ್ಜುನ‌. ಹೌದು, ಎರಡು ತಿಂಗಳ ಹಿಂದೆ ಗಜಪಯಣದೊಂದಿಗೆ ಅರಮನೆಗೆ ಬಂದ ಮಾಜಿ ಕ್ಯಾಪ್ಟನ್ ಅರ್ಜುನ, ಆರಾಮಾಗಿ ಅರಮನೆಯಲ್ಲಿಓಡಾಡಿಕೊಂಡಿದ್ದ. 'ಎರಡು ತಿಂಗಳು ಮೃಷ್ಟಾನ್ನ ಭೋಜನ ಮಾಡುತ್ತ ಇದ್ದೆ.ಈಗ ನಾನು ಮತ್ತೆ ಕಾಡಿಗೆ ಹೋಗಬೇಕಾ?' ಅಂತ ಮರ ಒರಗಿಕೊಂಡು ನಿಂತಿದ್ದ. ನಾನು ಏಳು ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ದೇನೆ. ಕೊರೊನಾ ಬಂದಾಗ ಅರಮನೆಯಲ್ಲಿಯೇ ಜಂಬೂಸವಾರಿ ಮೆರವಣಿಗೆ ನಡೆಯಿತು.ಈ ಬಾರಿ ಅದ್ಧೂರಿಯಾಗಿ ದಸರಾ ನಡೆದಿದೆ. ರಾಜಮಾರ್ಗಗಳಲ್ಲಿ ಹೆಜ್ಜೆ ಹಾಕಿ ಮಾಜಿ ಕ್ಯಾಪ್ಟನ್ ಆದರೂ ಜನರಿಂದ ಭೇಷ್​ ಎನ್ನಿಸಿಕೊಂಡಿದ್ದೇನೆ. ಆದರೆ,ಇಷ್ಟು ದಿನ ಅರಮನೆ ಆವರಣದಲ್ಲಿ ಚೆನ್ನಾಗಿ ಮೃಷ್ಟಾನ ಭೋಜನ ಮಾಡಿದೆ. ನಾಳೆ ಮತ್ತೆ ನನ್ನ ಸ್ವಸ್ಥಾನಕ್ಕೆ ಮರಳಬೇಕು ಎಂದು ಚಿಂತಿತನಾಗಿದ್ದ.

ABOUT THE AUTHOR

...view details