ನೋಡಿ: ಆನೆ ಅಕಿಲಾಗೆ 'ಫ್ರುಟ್‌ಫುಲ್' ಹ್ಯಾಪಿ ಬರ್ತ್‌ಡೇ! ಸೊಂಡಿಲು ಅಲ್ಲಾಡಿಸಿ ಸಂಭ್ರಮ - Elephant birthday
ತಮಿಳುನಾಡು: ತಿರುಚ್ಚಿಯ ತಿರುವನೈಕೊಯಿಲ್ ಅರುಲ್ಮಿಗು ಜಂಬುಕೇಶ್ವರರ್ ದೇವಸ್ಥಾನದಲ್ಲಿ 20ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿರುವಾಗ ಆನೆ ಅಕಿಲಾ ತನ್ನ ಸೊಂಡಿಲು ಅಲ್ಲಾಡಿಸಿ ವಿಶೇಷ ರೀತಿಯಲ್ಲಿ ಖುಷಿಪಟ್ಟಿತು. ನಿನ್ನೆ ದೇವಾಲಯದ ಆವರಣದಲ್ಲಿ ಬಗೆಬಗೆಯ ತರಕಾರಿ, ಹಣ್ಣುಗಳನ್ನು ಆನೆಗೆ ನೀಡಲಾಯಿತು. ಸಂತಸದಿಂದ ಹಣ್ಣು ತಿನ್ನುತ್ತಾ ಆನೆ ಸೊಂಡಿಲು ಅಲ್ಲಾಡಿಸುವುದನ್ನು ಕಂಡು ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.