ಗೆಣಸು ಮಾರಾಟದ ಜೊತೆಗೆ ಊರುರಿಗೆ ತೆರಳಿ ಶಿಕ್ಷಣ, ಪರಿಸರ ಜಾಗೃತಿ ಅಭಿಯಾನ - ಈಟಿವಿ ಭಾರತ ಕನ್ನಡ
ತುಮಕೂರು : ಹುಡುಗರೆಲ್ಲ ಚೆನ್ನಾಗಿ ಓದ್ಕೊಳ್ಳಿ, ನಾನು ಅವತ್ತು ಓದದೇ ಇದ್ದುದಕ್ಕೆ ಇವತ್ತು ಗೆಣಸು ಮಾರುತ್ತಿದ್ದೇನೆ. ಮಳೆಯಲ್ಲಿ ನೆನೆಯುತ್ತಿದ್ದೇನೆ, ಬಿಸಿಲಿನಲ್ಲೇ ತಿರುಗುತ್ತಿದ್ದೇನೆ. ಹೀಗೆಂದು ವ್ಯಕ್ತಿಯೊಬ್ಬರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಗೆಣಸು ಮಾರಾಟ ಮಾಡುತ್ತ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ತಮ್ಮ ಮನೆ ಸುತ್ತಮುತ್ತ ಹಾಗೂ ಜಮೀನುಗಳಲ್ಲಿ ಮರಗಳನ್ನು ಬೆಳೆಸಿ ಅದರಿಂದ ಉತ್ತಮವಾದ ಪರಿಸರವನ್ನು ಪಡೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಈ ರೀತಿ ಗೆಣಸು ಮಾರಾಟ ಮಾಡುವ ವ್ಯಕ್ತಿ ಪ್ರತಿ ನಿತ್ಯ ನಾಲ್ಕೈದು ಗ್ರಾಮಗಳಿಗೆ ತೆರಳಿ ಗೆಣಸು ಮಾರಾಟ ಮಾಡುವುದರೊಂದಿಗೆ ಜಾಗೃತಿಯನ್ನು ಸಹ ಮೂಡಿಸುತ್ತಿದ್ದಾರೆ.