ಕರ್ನಾಟಕ

karnataka

ETV Bharat / videos

ಅಪ್ಪು ಸ್ತಬ್ಧಚಿತ್ರಕ್ಕೆ ಎದ್ದು‌ ನಿಂತು ಗೌರವ.. ವಿಡಿಯೋ - ಈಟಿವಿ ಭಾರತ​ ಕರ್ನಾಟಕ

By

Published : Oct 5, 2022, 9:11 PM IST

ಮೈಸೂರು: ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ಅಪ್ಪು ಸ್ತಬ್ಧಚಿತ್ರ ನೋಡಿ ಜನ ಭಾವುಕರಾಗುವುದರ ಜೊತೆಗೆ ಕೆಲವೆಡೆ ಎದ್ದುನಿಂತು ಗೌರವ ನೀಡಿದರು. ಅರಮನೆ ಆವರಣದಿಂದ ಹಲವಾರು ಸ್ತಬ್ಧಚಿತ್ರಗಳು ಹೊರ ಬಂದವು. ಆ ವೇಳೆಯಲ್ಲಿ ಚೆಲುವ ಚಾಮರಾಜನಗರ ರಾಯಭಾರಿ ಪುನೀತ್ ರಾಜ್‌ಕುಮಾರ್ ಅವರಿಗೆ ನಮನ ಎಂಬ ಸ್ತಬ್ಧಚಿತ್ರದ ನೋಡಿದ ಪ್ರವಾಸಿಗರು ಹಾಗೂ ಸ್ಥಳೀಯರು ಒಂದು ಕ್ಷಣ ಭಾವುಕರಾಗಿ ಎದ್ದು ನಿಂತು ಗೌರವ ನೀಡಿದರು. ಅಲ್ಲದೇ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬನ್ನಿಮಂಟಪದವರೆಗೆ ಸಾಗುವವರೆಗೆ ಅಪ್ಪು ಅಪ್ಪು ಎಂದು ಘೋಷಣೆಗಳನ್ನು ಕೂಗಿ ಅಭಿಮಾನ ಮೆರೆದರು. ಅಲ್ಲದೇ ಸಾಂಸ್ಕೃತಿಕ ಕಲಾತಂಡಗಳು ಆಕರ್ಷಕ ನೃತ್ಯ ಮಾಡಿತ್ತ ಜನರನ್ನು ರಂಜಿಸಿದವು.

ABOUT THE AUTHOR

...view details