'ದ್ರೌಪದಿ ಮುರ್ಮು' ಐತಿಹಾಸಿಕ ಜಯಕ್ಕೆ ಕ್ಷಣಗಣನೆ.. ದೆಹಲಿಯಲ್ಲಿ ಸಂಭ್ರಮಾಚರಣೆ ಆರಂಭ! - ದ್ರೌಪದಿ ಮುರ್ಮು ಐತಿಹಾಸಿಕ ಜಯಕ್ಕೆ ಕ್ಷಣಗಣನೆ
ನವದೆಹಲಿ: ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವಿಗೆ ಕ್ಷಣಗಣನೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ದೆಹಲಿ ಬಿಜೆಪಿ ಪ್ರಧಾನ ಕಚೇರಿ ಹೊರಗೆ ಸಂಭ್ರಮಾಚರಣೆ ಆರಂಭಗೊಂಡಿದೆ. ಸಾವಿರಾರು ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡಿದ್ದು, ದ್ರೌಪದಿ ಮುರ್ಮು ಪರ ಘೋಷಣೆ, ಜೈಕಾರ ಹಾಕಲು ಶುರು ಮಾಡಿದ್ದಾರೆ. ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧ ದ್ರೌಪದಿ ಮುರ್ಮು ಸ್ಪರ್ಧೆ ಮಾಡಿದ್ದಾರೆ.