ನಕ್ಸಲರಿಂದ ರಸ್ತೆ ಬಂದ್: ಗರ್ಭಿಣಿಯನ್ನು ಮಂಚದ ಮೇಲೆ ಆಸ್ಪತ್ರೆಗೆ ಹೊತ್ತೊಯ್ದ ಯೋಧರಿಗೆ ಸಲಾಂ - DRG jawans taken pregnant woman to hospital in Dantewada
ಡಿಆರ್‌ಜಿ ಯೋಧರು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿರುವ ಘಟನೆ ಛತ್ತೀಸ್ಗಢದ ದಂತೇವಾಡ ಜಿಲ್ಲೆಯಲ್ಲಿ ನಡೆದಿದೆ. ಗ್ರಾಮಕ್ಕೆ ಇದ್ದ ರಸ್ತೆಯನ್ನು ನಕ್ಸಲರು ಬಂದ್ ಮಾಡಿದ್ದ ಕಾರಣದಿಂದಾಗಿ ವಾಹನ ಸಂಚಾರ ಸಾಧ್ಯವಾಗುತ್ತಿರಲಿಲ್ಲ. ಈ ವೇಳೆ ಸಮೀಪದ ಗ್ರಾಮವೊಂದರ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ಕರೆ ಮಾಡಿದರೂ, ಆ್ಯಂಬುಲೆನ್ಸ್ ಬರಲು ಸಾಧ್ಯವಾಗಲಿಲ್ಲ. ಈ ವೇಳೆ ಡಿಆರ್‌ಜಿ ಸಿಬ್ಬಂದಿ ಗರ್ಭಿಣಿಯನ್ನು ಮಂಚದ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.