ಕರ್ನಾಟಕ

karnataka

By

Published : May 8, 2022, 11:05 PM IST

ETV Bharat / videos

ಗಾಯಕನ ಮೇಲೆ ಭಾರತೀಯ ನೋಟುಗಳ ಜೊತೆಗೆ ಡಾಲರ್​ಗಳ ಸುರಿಮಳೆ- ವಿಡಿಯೋ

ಜಾಮ್‌ನಗರ (ಗುಜರಾತ್‌): ಗುಜರಾತ್‌ನಲ್ಲಿ ಗಾಯಕರ ಮೇಲೆ ದುಡ್ಡಿನ ಮಳೆಗರೆಯಲಾಗಿದೆ. ಶನಿವಾರ ಜಾಮ್‌ ನಗರದಲ್ಲಿ ಮಾಯಾಭಾಯಿ ಅಹಿರ್ ಮತ್ತು ಕೀರ್ತಿದಾನ್ ಗಧ್ವಿ ಅವರ ಸಂಗೀತ ಕಛೇರಿ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಭಾರತೀಯ ನೋಟುಗಳು ಮಾತ್ರವಲ್ಲದೇ ಡಾಲರ್ ನೋಟುಗಳನ್ನೂ ಗಾಯಕನ ತಲೆ ಮೇಲೆ ಸುರಿಯಲಾಗಿದೆ. ಈ ಕಾರ್ಯಕ್ರಮದಲ್ಲಿ ಹಲವು ಶಾಸಕರು ಕೂಡ ಪಾಲ್ಗೊಂಡಿದ್ದರು ಎನ್ನಲಾಗುತ್ತಿದೆ. ಸದ್ಯ ಗಾಯಕನ ಮೇಲೆ 500 ರೂ., 2,000 ರೂ. ಮುಖಬೆಲೆ ನೋಟುಗಳು ಹಾಗೂ ಡಾಲರ್ ನೋಟುಗಳ ಮಳೆಗರೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ABOUT THE AUTHOR

...view details