ಅಪರೂಪದ ಬಾಂಧವ್ಯ: ಹಸುವಿನ ಕರುವಿಗೆ ಹಾಲುಣಿಸುತ್ತಿರುವ ಶ್ವಾನ - ಹಸುವಿನ ಕರುವಿಗೆ ಹಾಲುಣಿಸುತ್ತಿರುವ ಶ್ವಾನ
ತುಮಕೂರು: ನಾಯಿಯೊಂದು ಹಸುವಿನ ಕರುವಿಗೆ ಹಾಲುಣಿಸುತ್ತಿರುವ ಅಪರೂಪದ ವಿದ್ಯಮಾನ ತಾಲೂಕಿನ ಕುಂದೂರು ಗ್ರಾಮದಲ್ಲಿ ಕಂಡುಬಂದಿದೆ. ಕಳೆದೊಂದು ವಾರದಿಂದ ಕರು ತನ್ನ ತಾಯಿಯ ಹಾಲು ಕುಡಿಯುವುದನ್ನು ಬಿಟ್ಟಿದೆಯಂತೆ. ಪ್ರತಿ ದಿನ ಕರು ಇರುವ ಜಾಗಕ್ಕೆ ಬರುವ ನಾಯಿ ಹಾಲುಣಿಸಿ, ಸುಮಾರು ಅರ್ಧ ಗಂಟೆಯ ನಂತರ ಸ್ಥಳದಿಂದ ಹೊರಟು ಹೋಗುತ್ತದೆ. ಇದು ಜನರಲ್ಲಿ ಸಾಕಷ್ಟು ಅಚ್ಚರಿ ಉಂಟುಮಾಡಿದೆ.