ಹಾವೇರಿಯಲ್ಲಿ ಮಳೆ ಕೊಯ್ಲಿನಿಂದ ಮಾದರಿಯಾದ ವೈದ್ಯ ಕುಟುಂಬ! - kannadanews
ಹಾವೇರಿಯಲ್ಲಿ ಒಂದು ವೈದ್ಯ ಕುಟುಂಬ ಮಳೆ ಕೊಯ್ಲು ಅಳವಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದೆ. ವೈದ್ಯ ಷಣ್ಮುಖಪ್ಪ ಮೂಲತಃ ಕೃಷಿ ಹಿನ್ನೆಲೆಯುಳ್ಳವರಾಗಿದ್ದು, ಜಮೀನಿನಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ಮಳೆ ಕೊಯ್ಲು ಮಾಡುತ್ತಿದ್ದಾರೆ. ಷಣ್ಮುಖಪ್ಪ ತಮ್ಮ ಜಮೀನಿನಲ್ಲಿ ಬಿದ್ದ ಮಳೆ ನೀರನ್ನ ಕೊಯ್ಲು ಮಾಡುವ ಮೂಲಕ ಉತ್ತಮ ಬೆಳೆಯಲ್ಲಿ ಇಳುವರಿ ಸಹ ಕಂಡುಕೊಂಡಿದ್ದಾರೆ. ಜೊತೆಗೆ ಹಾವೇರಿಯಲ್ಲಿ ತಮ್ಮ ಮನೆಯಲ್ಲೂ ಸಹ ಒಂದು ಹನಿ ನೀರು ಪೋಲಾಗದ ಹಾಗೆ ಮಳೆ ಕೊಯ್ಲು ಅಳವಡಿಸಿಕೊಳ್ಳಲಾಗಿದೆ.
Last Updated : Jun 27, 2019, 12:54 PM IST