ಒಂದು ದಿನದ ಪರಿಸರ ಪ್ರೇಮ ಅಪಾಯಕಾರಿ: ಪರಿಸರವಾದಿ ದಿನೇಶ್ ಹೊಳ್ಳ - mangalore environment day
ಜೂ. 5ರಂದು ವಿಶ್ವದಾದ್ಯಂತ ಪರಿಸರ ದಿನಾಚರಣೆ ಮಾಡಲಾಗುತ್ತದೆ. ಈ ದಿನ ಗಿಡ ನೆಟ್ಟು ಫೋಟೋಗೆ ಪೋಸ್ ಕೊಡುವವರೇ ಹೆಚ್ಚು. ಬಳಿಕ ಅದರ ಫೋಟೋಗಳನ್ನು ವಾಟ್ಸ್ಆ್ಯಪ್, ಫೇಸ್ಬುಕ್ಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಒಂದು ದಿನದ ಪರಿಸರ ಪ್ರೇಮ ಮೆರೆಯಲಾಗುತ್ತಿದೆ. ಇದಾದ ಬಳಿಕ ಮತ್ತೆ ಆ ಗಿಡದ ಬಳಿ ಸುಳಿಯುವುದೇ ಇಲ್ಲ. ಇಂತಹ ಪರಿಸರ ಪ್ರೇಮದ ಅಗತ್ಯವಿಲ್ಲ ಎಂದು ಪರಿಸರವಾದಿ ದಿನೇಶ್ ಹೊಳ್ಳ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.