ಈ ಊರಲ್ಲಿ ದೀಪಾವಳಿಯಂದು ಪಶುಗಳ ಗಡಿಪಾರು... ಈ ಪದ್ಧತಿಗಿದೆಯಂತೆ ದ್ವಾಪರ ಕಾಲದ ನಂಟು - ನಲ್ಗೊಂಡ ದೀಪಾವಳಿ ಆಚರಣೆ
ತೆಲಂಗಾಣದ ನಲ್ಗೊಂಡ ಜಿಲ್ಲೆಯ ತೆನೆಪಲ್ಲಿ ತಾಂಡದಲ್ಲಿ ದೀಪಾವಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಗ್ರಾಮದಲ್ಲಿದ್ದ ಪಶುಗಳನ್ನು ಊರ ಹೊರಗೆ ಗಡಿಪಾರು ಮಾಡುತ್ತಾರೆ. ಊರಿನಿಂದ ಓಡಿಸುವ ವೇಳೆ ಗ್ರಾಮಸ್ಥರು ಪಶುಗಳ ಮೇಲೆ ಕುಂಕುಮ, ಅರಿಶಿಣವನ್ನು ಎರಚುತ್ತಾರೆ. ಬಳಿಕ ಅವುಗಳನ್ನು ಊರಿನೊಳಗೆ ಕರೆದೊಯ್ದು ಪ್ರತ್ಯೇಕ ಪೂಜೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಮಳೆ-ಬೆಳೆ ಚೆನ್ನಾಗಿಯಾಗುತ್ತೆ ಎಂಬುದು ಗಿರಿಜನಗಳ ನಂಬಿಕೆ. ಇನ್ನು ದ್ವಾಪರ ಯುಗದಲ್ಲಿ ಕೌರವರ ಮತ್ತು ಪಾಂಡವರ ಮಧ್ಯೆ ನಡೆದ ಯುದ್ಧ ಸಮಯದಲ್ಲಿ ಅರ್ಜುನ ಪಶುಗಳಿಗೆ ಯಾವುದೇ ರೀತಿ ಹಾನಿಯಾಗದಂತೆ ನೋಡಿಕೊಳ್ಳುತ್ತಾನೆ. ಪಶುಗಳನ್ನು ಯುದ್ಧ ಕ್ಷೇತ್ರದಿಂದ ದೂರವಾಗಿ ಹೊರ ಕಳುಹಿಸುತ್ತಾನೆ. ಯುದ್ಧದ ಬಳಿಕ ಮತ್ತೆ ಆ ಪಶುಗಳನ್ನು ರಾಜ್ಯಕ್ಕೆ ಕರೆದುಕೊಂಡು ಬಂದು ಪೂಜೆ ಸಲ್ಲಿಸುತ್ತಾನೆ. ಈ ಪದ್ಧತಿಯನ್ನು ಇಲ್ಲಿನ ಗ್ರಾಮಸ್ಥರು ಅವಲಂಭಿಸುತ್ತಿದ್ದಾರೆ.