ಆ್ಯಕ್ಷನ್ ಮೂಡ್ನಲ್ಲಿ 'ವಾಮನ' ಅವತಾರ ತಾಳಿದ ಧನ್ವೀರ್: ಮೇಕಿಂಗ್ ವಿಡಿಯೋ - ವಾಮನ ಸಿನೆಮಾ ಆ್ಯಕ್ಷನ್ ವಿಡಿಯೋ
'ಬಜಾರ್' ಸಿನೆಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಭರವಸೆ ಹುಟ್ಟಿಸಿದ ಯುವ ನಟ ಧನ್ವೀರ್, 'ಬೈ ಟೂ ಲವ್' ನಂತ್ರ 'ವಾಮನ' ಅವತಾರ ತಾಳಿದ್ದಾರೆ. ಕೆಲ ತಿಂಗಳ ಹಿಂದೆ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಮಾಫಿಯಾ ಲೋಕದ ಕಥೆಯ ಜೊತೆಗೆ ಆ್ಯಕ್ಷನ್ ಹೊಂದಿರುವ ವಾಮನ ಚಿತ್ರದ ಮೇಕಿಂಗ್ ವಿಡಿಯೋವೊಂದು ಬಿಡುಗಡೆಯಾಗಿದೆ. ನಾಯಕಿಯಾಗಿ ರಚನಾ ರೈ ಅಭಿನಯಿಸಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ನಡಿ ಮೂಡಿಬರುತ್ತಿರುವ ಸಿನೆಮಾಗೆ ಚೇತನ್ ಕುಮಾರ್ ಬಂಡವಾಳ ಹೂಡಿದ್ದು, ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದೆ.