ಶ್ರಾವಣ ಮಾಸದ ಮೊದಲ ಸೋಮವಾರ: ಕಾಶಿ ವಿಶ್ವನಾಥ ದೇಗುಲದಲ್ಲಿ ಭಕ್ತರ ಸಮಾಗಮ - ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ
ಉತ್ತರ ಪ್ರದೇಶ: ಇಂದು ಶ್ರಾವಣ ಮಾಸದ ಮೊದಲ ಸೋಮವಾರ. ಶಿವನ ಭಕ್ತರಿಗೆ ಬಹಳ ಮಹತ್ವದ ದಿನ. ಶ್ರಾವಣ ಮಾಸವನ್ನು ಮಳೆಗಾಲದ ಆರಂಭ ಎಂದೂ ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಶಿವನನ್ನು ವಿವಿಧ ರೀತಿಯಲ್ಲಿ ಪೂಜಿಸಲಾಗುತ್ತದೆ. ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ನಾಡಿನ ಪ್ರಮುಖ ಶಿವಾಲಯಗಳಲ್ಲಿ ಭಕ್ತರ ದಂಡು ನೆರೆದಿದೆ. ವಿಶೇಷವಾಗಿ ವಿವಿಧೆಡೆಯಿಂದ ಪುಣ್ಯ ನದಿಗಳ ನೀರಿನಿಂದ ಕಾವಾಡಿಗಳು ಶಿವನಿಗೆ ಜಲಾಭಿಷೇಕ ಮಾಡುತ್ತಿದ್ದಾರೆ. ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಯ ನಂತರ ಇದು ಮೊದಲ ಶ್ರಾವಣ. ಈ ಬಾರಿ ಇತರ ದ್ವಾರಗಳ ಜೊತೆಗೆ ಭಕ್ತರು ಗಂಗಾ ದ್ವಾರದಿಂದ ಧಾಮವನ್ನು ಪ್ರವೇಶಿಸಿ ಕಾಶಿ ತಲುಪಬಹುದು. ಇಂದು ಸುಮಾರು ಐದು ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹಾಗಾಗಿ ದೇಗುಲದ ಬಳಿ 12 ಎಲ್‌ಇಡಿ ಟಿವಿಗಳನ್ನು ಅಳವಡಿಸಲಾಗಿದೆ. ಪೆಂಡಾಲ್‌ಗಳನ್ನು ಹಾಕಿ ಭಕ್ತರಿಗೆ ಅಚ್ಚುಕಟ್ಟಿನ ವ್ಯವಸ್ಥೆ ಕಲ್ಪಿಸಲಾಗಿದೆ.