ಗಣೇಶ ನಿಮಜ್ಜನ ಅದ್ಧೂರಿ ಮೆರವಣಿಗೆ.. ಆಂಬ್ಯುಲೆನ್ಸ್ ಬರುತ್ತಿದ್ದಂತೆ ಭಕ್ತರು ಮಾಡಿದ್ದೇನು? - ಗಣೇಶ ನಿಮಜ್ಜನ ಮೆರವಣಿಗೆ ವೇಳೆ ಆಗಮಿಸಿದ ಆಂಬ್ಯುಲೆನ್ಸ್
ಹಾವೇರಿ: ಗಣೇಶ ನಿಮಜ್ಜನ ಮೆರವಣಿಗೆ ವೇಳೆ ಆಗಮಿಸಿದ ಆಂಬ್ಯುಲೆನ್ಸ್ಗೆ ಸಂಘಟಕರು ದಾರಿ ಮಾಡಿಕೊಟ್ಟು ಭಕ್ತರು ನಿಯಮ ಪಾಲಿಸಿದ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ. ರಾಣೆಬೆನ್ನೂರು ಕಾ ರಾಜಾ ಗಣಪತಿ ನಿಮಜ್ಜನ ಮೆರವಣಿಗೆ ವೇಳೆ ಗರ್ಭಿಣಿ ಹಾಗೂ ರೋಗಿಯೊಬ್ಬರನ್ನು ಕರೆದುಕೊಂಡು ಹೋಗುತ್ತಿದ್ದ ಆಂಬ್ಯುಲೆನ್ಸ್ ಆಗಮಿಸಿತು. ಈ ವೇಳೆ ಡಿಜೆ ಸೌಂಡ್ಗೆ ಡ್ಯಾನ್ಸ್ ಮಾಡುತ್ತಿದ್ದ ಜನಸಂದಣಿಯನ್ನ ಸಂಘಟಕರು ಪಕ್ಕಕ್ಕೆ ಸರಿಸಿ, ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಟ್ಟರು.