ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ - Maidadi village in the Moodigere Taluk
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಮೈದಾಡಿ ಗ್ರಾಮದ ಕಾಫಿ ತೋಟದ ಪೊದೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ಶ್ರೀನಿವಾಸಗೌಡ ಎಂಬವರ ಕಾಫಿ ತೋಟದಲ್ಲಿ ಹಾವು ಕಾಣಿಸಿಕೊಂಡಿದ್ದು, ತೋಟದ ಮಾಲೀಕರು ಕೂಡಲೇ ವಿಚಾರವನ್ನು ಉರಗಪ್ರೇಮಿ ರಿಜ್ವಾನ್ ಅವರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ರಿಜ್ವಾನ್ ಹಾವನ್ನು ರಕ್ಷಿಸಿದ್ದು, ಮೂಡಿಗೆರೆಯ ಅರಣ್ಯ ಸಿಬ್ಬಂದಿ ಸಮ್ಮುಖದಲ್ಲಿ ಕುದುರೆಮುಖ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ಹೆಬ್ಬಾವು ಸುಮಾರು 14 ಅಡಿ ಉದ್ದವಿತ್ತು.