ಪ್ರಯಾಗ್‌ರಾಜ್ ಹಿಂಸಾಚಾರ: ಜೆಸಿಬಿ ಮೂಲಕ ಆರೋಪಿಗಳ ಅಕ್ರಮ ಮನೆ, ಕಟ್ಟಡ ನೆಲಸಮ - ಮುಸ್ಲಿಮರ ಪ್ರತಿಭಟನೆ
ಉತ್ತರ ಪ್ರದೇಶ: ಪ್ರವಾದಿ ಮೊಹಮ್ಮದ್ ವಿರುದ್ಧದ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರಯಾಗ್‌ರಾಜ್‌ನಲ್ಲಿ ಹಿಂಸಾಚಾರ ಸೃಷ್ಟಿಸಿದ್ದ ಆರೋಪಿ ಜಾವೇದ್ ಅಹಮದ್ ಎಂಬಾತ ನಿರ್ಮಿಸಿದ ಅಕ್ರಮ ಕಟ್ಟಡವನ್ನು ಇಂದು ಜೆಸಿಬಿ ಮೂಲಕ ಕೆಡವಲಾಗಿದೆ. ಈ ಮೂಲಕ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಳಿಸಿ, ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸುತ್ತಿದೆ. ಅಕ್ರಮ ಕಟ್ಟಡ ತೆರವುಗೊಳಿಸುವಂತೆ ನೋಟಿಸ್ ನೀಡಿದ ಬಳಿಕ ಪ್ರಯಾಗ್‌ರಾಜ್ ಡೆವಲಪ್‌ಮೆಂಟ್ ಅಥಾರಿಟಿ ಕಟ್ಟಡವನ್ನಿಂದು ಕೆಡವಿತು.