ಸಮಾಜಘಾತುಕ ಶಕ್ತಿಗಳ ಮಟ್ಟಹಾಕಲು ದೆಹಲಿ ಪೊಲೀಸರಿಂದ ಡ್ರೋನ್ ಕಣ್ಗಾವಲು- ವಿಡಿಯೋ - ದೆಹಲಿಯ ಜಾಮಿಯಾ ನಗರದಲ್ಲಿ ಪೊಲೀಸ್ ಬಿಗಿ ಭದ್ರತೆ
ರಾಮನವಮಿ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ದೆಹಲಿಯ ಜಾಮಿಯಾ ನಗರ ಮತ್ತು ಜಸೋಲಾದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಿದ್ದು ಮಾತ್ರವಲ್ಲದೇ ಡ್ರೋನ್ಗಳನ್ನು ಬಳಸಿ ಶಾಂತಿ ಕದಡುವ ಕಿಡಿಗೇಡಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಡ್ರೋನ್ಗಳು ಕಾಲಕಾಲಕ್ಕೆ ಪ್ಯಾಟ್ರೋಲಿಂಗ್ ಮಾಡಲಿದ್ದು, ಈ ಮೂಲಕ ಶಾಂತಿ ಕದಡುವ ಘಟನೆಗಳನ್ನು ನಿಯಂತ್ರಣಕ್ಕೆ ತರುವ ಉಪಾಯ ದೆಹಲಿ ಪೊಲೀಸರದ್ದಾಗಿದೆ.