ಧಾರವಾಡ: ಬೆಣ್ಣೆಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ - ಈಟಿವಿ ಭಾರತ್ ಕನ್ನಡ
ಧಾರವಾಡ: ಇಲ್ಲಿನ ಬೆಣ್ಣೆಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಬಳಿ ಸದಾನಂದ ಮಾದರ (32) ಎಂಬುವವರು ಬೈಕ್‌ಸಮೇತ ನೀರು ಪಾಲಾಗಿದ್ದರು. ಕಳೆದ ಶುಕ್ರವಾರ ಹಳ್ಳ ದಾಟುತ್ತಿದ್ದಾಗ ಘಟನೆ ಸಂಭವಿಸಿತ್ತು. ಇದೀಗ ಶವವನ್ನು ಮೇಲೆತ್ತಲಾಗಿದೆ.