ದಸರಾ ಮಹೋತ್ಸವದಲ್ಲಿ ಗಮನ ಸೆಳೆದ ದಸರಾ ಡಾಗ್ ಶೋ: ವಿಡಿಯೋ - ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಕು ಶ್ವಾನಗಳ ಸ್ಪರ್ಧೆ ಗಮನ ಸೆಳೆದಿದ್ದು, ಈ ಸ್ಪರ್ಧೆಯಲ್ಲಿ 18 ತಳಿಯ 400 ಕ್ಕೂ ಹೆಚ್ಚು ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ದಸರಾ ಮಹೋತ್ಸವ 2022 ರ ಅಂಗವಾಗಿ ನಗರದ ವಿಶ್ವ ವಿದ್ಯಾಲಯದ ಕ್ರೀಡಾಂಗಣದಲ್ಲಿ ರೈತ ದಸರಾ ವೇದಿಕೆಯಿಂದ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ದಸರಾ ಸಾಕು ನಾಯಿಗಳ ಪ್ರದರ್ಶನದಲ್ಲಿ ಮುಧೋಳ್, ಲ್ಯಾಬ್, ಜರ್ಮನ್ ಶಫರ್ಡ್, ಪಗ್, ಗೋಲ್ಡನ್ ರೇಟರಿವರ್, ಬುಲ್ ಡಾಗ್, ರಾಟವಿಲ್ಲರ್, ಪಮೋರಿಯನ್ ಸೇರಿದಂತೆ 18ಕ್ಕೂ ಹೆಚ್ಚು ತಳಿಯ 400ಕ್ಕೂ ಹೆಚ್ಚು ಶ್ವಾನಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪ್ರತಿ ಶ್ವಾನಕ್ಕೂ ಅದರ ವಯೋಮಾನಕ್ಕೆ ಅನುಗುಣವಾಗಿ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿತ್ತು.