ನವರಾತ್ರಿ ಸಂಭ್ರಮ: ಕೋಲಾರದಲ್ಲಿ ದಾಂಡಿಯಾ ನೃತ್ಯದ ಝಲಕ್ - navaratri celebrations
ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಕಳೆದ 25 ವರ್ಷಗಳಿಂದ ಗುಜರಾತ್ ಮೂಲದ ಪಾಟೀದಾರ್ ಸಮುದಾಯ ನೆಲೆಸಿದ್ದು, ಪ್ರತಿ ವರ್ಷ ದಸರಾ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡ್ತಾರೆ. ಒಂಬತ್ತು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ದುರ್ಗಾ ಮಾತೆಗೆ ಪೂಜೆ ಸಲ್ಲಿಸಲಾಗುತ್ತದೆ. ಒಂಬತ್ತನೇ ದಿನವಾದ ನಿನ್ನೆ ಗರ್ಬಾ ಮತ್ತು ದಾಂಡಿಯಾ ನೃತ್ಯ ಮಾಡಿ ಮಹಿಳೆಯರು ಮತ್ತು ಪುರುಷರು ಸಂಭ್ರಮಿಸಿದರು.