ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳಿಂದ ನೀರು ಬಿಡುಗಡೆ: ಪ್ರವಾಹ ಭೀತಿಯಲ್ಲಿ ಜನರು
ಚಿಕ್ಕೋಡಿ: ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ 1,96,792 ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 20,034 ಕ್ಯೂಸೆಕ್, ವಾರಣಾ ಜಲಾಶಯದಿಂದ 9,943 ಕ್ಯೂಸೆಕ್, ರಾಧಾನಗರಿ ಜಲಾಶಯದಿಂದ 4,256 ಕ್ಯೂಸೆಕ್, ದೂಮ್ ಜಲಾಶಯದಿಂದ 6,965 ಕ್ಯೂಸೆಕ್, ಕನೇರ್ ಜಲಾಶಯದಿಂದ 2,216 ಕ್ಯೂಸೆಕ್ ಮತ್ತು ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 1,63,000 ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದೆ. ತಾಲೂಕು ಆಡಳಿತ ಸಂಭವನೀಯ ನೆರೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ, ಅಗತ್ಯ ಮುಂಜಾಗ್ರತ ಕ್ರಮ ಕೈಗೊಂಡಿದೆ ಹಾಗೂ ಎನ್‌ಡಿಆರ್‌ಎಫ್ ತಂಡವನ್ನು ಕರೆಸಿಕೊಂಡಿದೆ.