ಅತಿವೇಗದ ಚಾಲನೆಗೆ 11 ಬಾರಿ ದಂಡ ಪಾವತಿಸಿದ್ದ ಸೈರಸ್ ಮಿಸ್ತ್ರಿ..ಕಾರು ಅಪಘಾತದಿಂದ ಹೊರಬಿತ್ತು ಮಾಹಿತಿ - ಈಟಿವಿ ಭಾರತ ಕನ್ನಡ
ಮುಂಬೈ: ಮುಂಬೈ - ಅಹಮದಾಬಾದ್ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಕಾರು ಅಪಘಾತದಲ್ಲಿ ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದಾರೆ. ಇವರ ಸಾವಿನ ಬಳಿಕ ಇದೀಗ ಒಂದೊಂದೇ ಸಂಗತಿಗಳು ಹೊರ ಬರುತ್ತಿವೆ. ಉದ್ಯಮಿ ಸೈರಸ್ ಮಿಸ್ತ್ರಿ ಅವರ ಮರ್ಸಿಡಿಸ್ ಜಿಎಲ್‌ಸಿ 220 ಕಾರು ಮಹಾರಾಷ್ಟ್ರದ ಪಾಲ್ಘರ್ ಬಳಿ ಅಪಘಾತವಾಗಿತ್ತು. ಅಪಘಾತದಲ್ಲಿ ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ (49) ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲದೇ ಈ ಹಿಂದೆ ಅತಿವೇಗದ ಚಾಲನೆಗಾಗಿ ಸೈರಸ್ ಮಿಸ್ತ್ರಿಯವರಿಗೆ ಹನ್ನೊಂದು ಬಾರಿ ದಂಡ ವಿಧಿಸಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಮಿಸ್ತ್ರಿಯವರು ಎಂಹೆಚ್ 47 ಎಬಿ 6705 ನೋಂದಣಿಯ ಕಾರನ್ನು ಚಲಾಯಿಸುತ್ತಿದ್ದರು.ಇವರಿಗೆ 2019ರ ಮೇ 24ರಿಂದ 2022ರ ಎಪ್ರಿಲ್ 15ರವರೆಗೆ ಅತಿವೇಗದ ಚಾಲನೆಗೆ ಒಟ್ಟು 13000 ರೂ ದಂಡ ವಿಧಿಸಲಾಗಿತ್ತು ಎಂದು ತಿಳಿದು ಬಂದಿದೆ.