ಕೇದಾರನಾಥ ಯಾತ್ರೆ: ಏಕಕಾಲಕ್ಕೆ 25 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಲಗ್ಗೆ; ಫುಲ್ ಜಾಮ್ - ಕೇದಾರನಾಥನಲ್ಲಿ ಯಾತ್ರಾರ್ಥಿಗಳು
ರುದ್ರಪ್ರಯಾಗ್(ಉತ್ತರಾಖಂಡ): ಕಳೆದ ಎರಡು ದಿನಗಳ ಕಾಲ ಕೇದಾರನಾಥ ಕಣಿವೆಯಲ್ಲಿ ಮಳೆ ಸುರಿದ ಕಾರಣ, ಇಂದು ಬಿಸಿಲು ಕಂಡು ಬಂದಿದೆ. ಹೀಗಾಗಿ, ಬರೋಬ್ಬರಿ 25 ಸಾವಿರಕ್ಕೂ ಅಧಿಕ ಯಾತ್ರಾರ್ಥಿಗಳನ್ನ ಏಕಕಾಲಕ್ಕೆ ಕೇದಾರದತ್ತ ಪ್ರಯಾಣ ಬೆಳೆಸಿರುವ ಕಾರಣ, ಮಾರ್ಗದಲ್ಲಿ ಫುಲ್ ಜಾಮ್ ಆಗಿದೆ. ರುದ್ರಪ್ರಯಾಗ್ನಲ್ಲಿ ಜನರು ಕಾಲಿಡಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಎಲ್ಲಿ ನೋಡಿದರೂ ಜನರ ತಲೆಗಳು ಮಾತ್ರ ಕಾಣಿಸುತ್ತಿದೆ.