ಕೋಲ್ಕತ್ತಾ ಉದ್ಯಮಿಯ ಕೋಟಿಗಟ್ಟಲೆ ಹಣ ಮಷಿನ್ ಮೂಲಕ ಎಣಿಕೆ: ವಿಡಿಯೋ
ಕೋಲ್ಕತ್ತಾದ ಸಾರಿಗೆ ಉದ್ಯಮಿಯೊಬ್ಬರ ನಿವಾಸದ ಮೇಲೆ ಶನಿವಾರ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಇಡಿ) ಭಾರಿ ಮೊತ್ತದ ನಗದನ್ನು ವಶಪಡಿಸಿಕೊಂಡಿದೆ. ಆರೋಪಿ ನಿಸಾರ್ ಖಾನ್ ಮನೆಯಿಂದ ಪತ್ತೆಯಾದ ಕೋಟ್ಯಂತರ ರೂಪಾಯಿ ಹಣ ಎಣಿಸುವ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ ಬ್ಯಾಂಕ್ವೊಂದರ ಕೌಂಟಿಂಗ್ ಮಷಿನ್ ತರಿಸಲಾಗಿದೆ.