ಕೊರೊನಾ ಲಾಕ್‌ಡೌನ್ ಎಫೆಕ್ಟ್; ಸಂಕಷ್ಟದಲ್ಲಿ ಸವಿತಾ ಸಮಾಜ..! - ಹಾವೇರಿಯಲ್ಲಿ ಸಂಕಷ್ಟದಲ್ಲಿ ಸವಿತಾ ಸಮಾಜ
ಮಹಾಮಾರಿ ಕೋವಿಡ್19 ಲಕ್ಷಾಂತರ ಜನರ ಬದುಕನ್ನು ಕಿತ್ತುಕೊಂಡಿದೆ. ತಮ್ಮ ಕಸುಬನ್ನೇ ನಂಬಿ ಜೀವನ ನಡೆಸುತ್ತಿದ್ದ ಬಹುತೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾವೇರಿಯಲ್ಲಿ ಕ್ಷೌರಿಕ ವೃತ್ತಿಯನ್ನೇ ನಂಬಿ ಬದುಕಿನ ಬಂಡಿ ಎಳೆಯುತ್ತಿದ್ದ ಸವಿತಾ ಸಮಾಜದ ನೂರಾರು ಕುಟುಂಬಗಳ ಪರದಾಟ ಹೇಳತೀರದ್ದಾಗಿದೆ.