ವಿತ್ತ ಸಚಿವೆ ಸೀತಾರಾಮನ್ ಬೆಂಗಾವಲು ವಾಹನ ತಡೆಗೆ 'ಕೈ' ಕಾರ್ಯಕರ್ತರ ಯತ್ನ: ವಿಡಿಯೋ - Etv bharat kannada
ಕಾಮರೆಡ್ಡಿ(ತೆಲಂಗಾಣ): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆಲಂಗಾಣ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅವರ ಬೆಂಗಾವಲು ವಾಹನದ ಮಾರ್ಗ ತಡೆಯುವ ಯತ್ನ ನಡೆಸಿದ್ದಾರೆ. ತೆಲಂಗಾಣದ ಕಾಮರೆಡ್ಡಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಚಿವೆ ಆಗಮಿಸುತ್ತಿದ್ದರು. ತಕ್ಷಣವೇ ಕಾರ್ಯಪ್ರವೃತರಾದ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಇದಾದ ಬಳಿಕ ಬೀದಿಗಿಳಿದ ಬಿಜೆಪಿ ಬೆಂಬಲಿಗರು ಸಚಿವರ ಪರ ಘೋಷಣೆ ಕೂಗಿದರು.