ಕರ್ನಾಟಕ

karnataka

ETV Bharat / videos

ತಲ್ವಾರ್​ನಿಂದ ಕೇಕ್ ಕತ್ತರಿಸಿ ಹುಟ್ದಬ್ಬ ಆಚರಿಸಿಕೊಂಡ ಕಾಂಗ್ರೆಸ್ ಮುಖಂಡ - ಜನ್ಮ ದಿನ ಆಚರಿಸದ ಕಾಂಗ್ರೇಸ್ ಮುಖಂಡ

By

Published : Jun 1, 2022, 3:50 PM IST

ಯಾದಗಿರಿ: ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ರಾಜಾ ಕುಮಾರ ನಾಯಕ ತಲ್ವಾರ್‌ನಿಂದ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿಕೊಂಡಿರುವುದು ಟೀಕೆಗೆ ಗುರಿಯಾಗಿದೆ. ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ ಅವರ ಸಮ್ಮುಖದಲ್ಲೇ ತಲ್ವಾರ್ ಪ್ರದರ್ಶಿಸಿ ಕೇಕ್ ಕತ್ತರಿಸಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮೇ 24ರಂದು ಸುರಪುರದಲ್ಲಿ ಜನ್ಮದಿನ ಆಚರಣೆ ನಡೆದಿದ್ದು, ತಲ್ವಾರ್ ಪ್ರದರ್ಶನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಹಾಡು ಹೊಂದಿಸಿ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ವೈರಲ್‌ ಮಾಡಿದ್ದಾರೆ.

ABOUT THE AUTHOR

...view details