ಕರ್ನಾಟಕ

karnataka

ETV Bharat / videos

8ನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್ 'ಭಾರತ್ ಜೋಡೋ'... ರಾಹುಲ್​​ ಜೊತೆ ಅನೇಕರು ಸಾಥ್​ - ಈಟಿವಿ ಭಾರತ ಕರ್ನಾಟಕ

By

Published : Sep 14, 2022, 8:28 AM IST

ತಿರುವನಂತಪುರಂ(ಕೇರಳ): ಕಾಂಗ್ರೆಸ್ ಹಮ್ಮಿಕೊಂಡಿರುವ 'ಭಾರತ್ ಜೋಡೋ' ಯಾತ್ರೆ 8ನೇ ದಿನಕ್ಕೆ ಕಾಲಿಟ್ಟಿದೆ. ಕೇರಳದ ನವಯಿಕ್ಕುಳಂನಿಂದ ಇಂದಿನ ಯಾತ್ರೆ ಆರಂಭಗೊಂಡಿದೆ. ಈ ವೇಳೆ ಸಂಸದ ರಾಹುಲ್ ಗಾಂಧಿ ಜೊತೆ ಅನೇಕ ಮುಖಂಡರು, ಬೆಂಬಲಿಗರು ಸಾಥ್​ ನೀಡಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ 'ಭಾರತ್ ಜೋಡೋ' ಯಾತ್ರೆ ಇದಾಗಿದೆ. ಒಟ್ಟು 3,500 ಕಿಲೋಮೀಟರ್ ದೂರದ ಈ ಯಾತ್ರೆಯ ಸಾರಥ್ಯವನ್ನು ಕಾಂಗ್ರೆಸ್​ ನಾಯಕ, ಸಂಸದ ರಾಹುಲ್ ಗಾಂಧಿ ವಹಿಸಿಕೊಂಡಿದ್ದಾರೆ. ತಮಿಳುನಾಡಿನಿಂದ ಆರಂಭಗೊಂಡಿರುವ ಈ ಯಾತ್ರೆ ಮುಂದಿನ ಕೆಲ ದಿನಗಳಲ್ಲಿ ಕರ್ನಾಟಕ ಪ್ರವೇಶ ಪಡೆದುಕೊಳ್ಳಲಿದೆ. ಒಟ್ಟು 150 ದಿನಗಳ ಕಾಲ ನಡೆಯಲಿರುವ ಯಾತ್ರೆ ಜಮ್ಮು-ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ.

ABOUT THE AUTHOR

...view details