ಹಾವೇರಿಯಲ್ಲಿ ವರುಣನ ಆರ್ಭಟ.. ಸಿಡಿಲು ಅಪ್ಪಳಿಸಿ ಹೊತ್ತಿ ಉರಿದ ತೆಂಗಿನ ಮರ - ಹಾವೇರಿಯಲ್ಲಿ ಭಾರಿ ಮಳೆ
ಹಾವೇರಿ: ಜಿಲ್ಲೆಯಾದ್ಯಂತ ಗುರುವಾರ ಸಂಜೆ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಹಾವೇರಿ ತಾಲೂಕಿನ ಹಿರೇಲಿಂಗದಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ತೆಂಗಿನ ಮರ ಹೊತ್ತಿ ಉರಿದಿದೆ. ಮಹದೇವಗೌಡ ಪಾಟೀಲ ಎಂಬುವರ ಜಮೀನಿನಲ್ಲಿದ್ದ ತೆಂಗಿನಮರಕ್ಕೆ ಸಿಡಿಲು ಅಪ್ಪಳಿಸಿದೆ. ಮಳೆ ಹಿನ್ನೆಲೆಯಲ್ಲಿ ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತಲ್ಲದೆ, ಹಲವೆಡೆ ಮರಗಳು ಧರೆಗುರುಳಿ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಯಿತು.