ಮನೆಯೊಳಗೆ ನುಗ್ಗಿ ವಾಷಿಂಗ್ ಮಷಿನ್ ಕೆಳಗೆ ಕುಳಿತಿದ್ದ ನಾಗಪ್ಪ.. ಮುಂದೇನಾಯ್ತು? - cobra rescued which was hidden under washing machine at Shivamoga
ಶಿವಮೊಗ್ಗ: ವಾಷಿಂಗ್ ಮಷಿನ್ ಕೆಳಗೆ ಅವಿತುಕೊಂಡಿದ್ದ ಮೂರು ಅಡಿ ಉದ್ದದ ನಾಗರ ಹಾವನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಕಾಶಿಪುರದ ಲಕ್ಕಪ್ಪನ ಲೇಔಟ್ ನಲ್ಲಿ ನಡೆದಿದೆ. ಲಕ್ಕಪ್ಪನ ಲೇಔಟ್ ನ ವಿಜಯ ಕುಮಾರ್ ಎಂಬುವರ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡು ಮನೆಯವರಿಗೆ ಗಾಬರಿಯನ್ನುಂಟು ಮಾಡಿತ್ತು. ಈ ಬಗ್ಗೆ ಮನೆಯವರು ತಕ್ಷಣ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಸ್ನೇಕ್ ಕಿರಣ್ ಅವರು ನಾಗರಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.