ಶಿವಮೊಗ್ಗ: ಕೋಳಿ ಕಚ್ಚಿ ಕೊಂದು, ಮೊಟ್ಟೆ ನುಂಗಿದ ನಾಗರಹಾವು, ರಕ್ಷಣೆ - ಮೊಟ್ಟೆ ನುಂಗಿದ ನಾಗರ ಹಾವು ರಕ್ಷಣೆ
ಶಿವಮೊಗ್ಗ: ಜಿಲ್ಲೆಯ ತೇವರೆ ಚಟ್ನಹಳ್ಳಿಯಲ್ಲಿ ಕೋಳಿಯನ್ನು ಕಚ್ಚಿ ಕೊಂದು, ಮೊಟ್ಟೆಗಳನ್ನು ನುಂಗಿದ್ದ ನಾಗರ ಹಾವನ್ನು ಸ್ನೇಕ್ ಕಿರಣ್ ರಕ್ಷಿಸಿದ್ದಾರೆ. ಉಮೇಶ್ ಎಂಬುವರ ಮನೆಯಲ್ಲಿ ಕೋಳಿ ಸಾಗಾಣಿಕೆ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಕೋಳಿಯೊಂದು ಮೊಟ್ಟೆಗೆ ಕಾವು ನೀಡುತ್ತಿತ್ತು. ಆದರೆ ಕಾವು ನೀಡಲು ಕುಳಿತ ಕೋಳಿ ಇಂದು ಏಕಾಏಕಿ ಕೂಗಲು ಪ್ರಾರಂಭಿಸಿದೆ. ಆದರೆ ಉಮೇಶ್ ಈ ಬಗ್ಗೆ ಗಮನಹರಿಸಿಲ್ಲ. ಬಳಿಕ ಕೋಳಿ ಗೂಡಿನ ಬಳಿ ಬಂದು ನೋಡಿದಾಗ ನಾಗರ ಹಾವು ಮೊಟ್ಟೆಯನ್ನು ನುಂಗುತ್ತಿತ್ತು. ತಕ್ಷಣ ಅವರು ಸ್ನೇಕ್ ಕಿರಣಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಕಿರಣ್ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.